ರ್ಯಾಮ್ಸೆ, ವಿಲಿಯಮ್
1852-1916. ಸ್ಕಾಟ್ಲೆಂಡ್ ಸಂಜಾತ ರಸಾಯ ನವಿe್ಞÁನಿ. ಈತನದು ಬಹುಮುಖ ಪ್ರತಿಭೆ. ತಾರುಣ್ಯದಲ್ಲಿ ಸಂಗೀತ ಸಾಹಿತ್ಯಗಳಲ್ಲಿ ಆಸಕ್ತಿ. ಗಣಿತ ಮತ್ತು ವಿe್ಞÁನಗಳ ಕಡೆಗೆ ಒಲವು. ಕಟ್ಟುಮಸ್ತಾದ ಆರೋಗ್ಯವಂತ ಯುವಕ. ಗಾಜೂಡುವ ತಂತ್ರ ಪರಿಣತ. ತನ್ನ ಪ್ರಯೋಗಗಳಿಗೆ ಬೇಕಾದ ಎಲ್ಲ ಗಾಜಿನ ಉಪಕರಣಗಳನ್ನೂ ತಾನೇ ತಯಾರಿಸಿಕೊಳ್ಳುತ್ತಿದ್ದನಂತೆ. ಜರ್ಮನಿಯಲ್ಲಿ ಬುನ್‍ಸೆನ್‍ನ (1811-99) ಮಾರ್ಗದರ್ಶನದಲ್ಲಿ ರಸಾಯನವಿe್ಞÁನದ ಅಭ್ಯಾಸ. ಒಮ್ಮೆ ರ್ಯಾಲೆ (1842-1919) ಒಡ್ಡಿದ ಒಂದು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ರ್ಯಾಮ್ಸೆ ಅದನ್ನು ಬಗೆಹರಿಸಿ ವಿಖ್ಯಾತನಾದ. ಸಂಯುಕ್ತಗಳಿಂದ ಬೇರ್ಪಡಿಸಿದ ನೈಟ್ರೊಜನ್, ಅನಿಲದಿಂದ ಪಡೆದ ನೈಟ್ರೊಜನ್‍ಗಿಂತ ತುಸು ಸಾಂದ್ರವಾಗಿತ್ತು. ಶತ ಮಾನದ ಹಿಂದೆಯೇ, ಕ್ಯಾವೆಂಡಿಷ್ (1731-1810) ಗಾಳಿಯ ಆಕ್ಸಿಜನ್‍ನೊಡನೆ ನೈಟ್ರೊಜನ್ ಸಂಯೋಜಿಸಿ ದಾಗ ಅನಿಲದ ಗುಳ್ಳೆಯೊಂದು ಉಳಿದಿದ್ದರಿಂದ ಅದು ನೈಟ್ರೊಜನ್‍ಗಿಂತ ಭಾರತರ ಅe್ಞÁತ ಅನಿಲವಾಗಿರಬೇ ಕೆಂದು ಊಹಿಸಿದ್ದ. ಅದು ನೆನಪಾಗಿ ರ್ಯಾಮ್ಸೆ ಅದೇ ಪ್ರಯೋಗವನ್ನು ಪುನರಾವರ್ತಿಸಿದ. ಕ್ಯಾವೆಂಡಿಷ್‍ನ ಅನುಭವ ಈತನಿಗೂ ಆಯಿತು. ಅನಿಲದ ಗುಳ್ಳೆ ಉಳಿಯಿತು. ಅದನ್ನು ರೋಹಿತದರ್ಶಕದಿಂದ (ಕ್ಯಾವೆಂಡಿಷ್‍ಗೆ ಈ ಅನುಕೂಲವಿರಲಿಲ್ಲ) ಪರೀಕ್ಷಿಸಿದಾಗ ಗೋಚರವಾದ ವಿಶಿಷ್ಟ ರೇಖೆಗಳು ಅಂದು ಪರಿಚಿತವಾಗಿದ್ದ ಯಾವ ಧಾತುಗಳ ರೋಹಿತದೊಂದಿಗೂ ತಾಳೆಯಾಗುತ್ತಿರಲಿಲ್ಲ. ಅದು ನೈಟ್ರೊಜನ್‍ಗಿಂತ ಭಾರತರ ಧಾತುವಾಗಿತ್ತು. ವಾಯುಮಂಡಲದಲ್ಲಿ ಅದರ ಅಂಶ ಕೇವಲ 1%, ರಾಸಾಯನಿಕವಾಗಿ ಜಡ. ಯಾವ ಪರಿಚಿತ ಧಾತುವಿನೊಡ ನೆಯೂ ಸಂಯೋಜಿಸುತ್ತಿರಲಿಲ್ಲ. ಆದ್ದರಿಂದ ಅದಕ್ಕೆ ಆರ್ಗಾನ್ (ಗ್ರೀಕ್: ಆರ್ಗಾಸ್=ಜಡ) ಎಂದು ಹೆಸರಿಟ್ಟ. ಅದರ ಪರಮಾಣು ತೂಕ ವನ್ನು ಅನುಸರಿಸಿದರೆ ಮೆಂಡಲೀವನ ಆವರ್ತಕೋಷ್ಟಕದಲ್ಲಿ ಕ್ಲೋರೀನ್ ಮತ್ತು ಪೊಟ್ಯಾಸಿಯಮ್‍ಗಳ ನಡುವಿನ ಸ್ಥಾನದಲ್ಲಿಡಬೇಕಾಗುತ್ತಿತ್ತು. ಇವೆರಡೂ ಏಕವೇಲೆನ್ಸೀಯ ಆದರೆ ಆರ್ಗಾನ್‍ನ ವೇಲೆನ್ಸಿ ಶೂನ್ಯ (0). ಆವರ್ತಕೋಷ್ಟಕದಲ್ಲಿ ಸೊನ್ನೆ ವೇಲೆನ್ಸಿಯುಳ್ಳ ಧಾತುಗಳ ಒಂದು ಗುಂಪೇ ಇರಬೇಕೆಂದು ರ್ಯಾಮ್ಸೆಗೆ ಭಾಸವಾಯಿತು. ತಡಮಾಡದೆ ಅವುಗಳ ಶೋಧದಲ್ಲಿ ತೊಡಗಿದ. ಕ್ಲೀವೈಟ್ ಎಂಬುದು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ದೊರೆಯುವ ಒಂದು ಯುರೇನಿಯಮ್ ಖನಿಜ. ಇದೊಂದು ಅನಿಲವನ್ನು ಹೊರಸೂಸುತ್ತಿತ್ತು. ಅದರ ರೋಹಿತದಲ್ಲಿ ಮೂಡಿದ ರೇಖೆಗಳು ನೈಟ್ರೊಜನ್ ಅಥವಾ ಆರ್ಗಾನ್‍ಗಳ ರೋಹಿತ ರೇಖೆಗಳಂತಿರಲಿಲ್ಲ. ಅಲ್ಲದೆ 1868ರಲ್ಲಿ ಜಾನ್ಸನ್ ಮತ್ತು ಲಾಕಿಯರ್‍ರವರು ಸೌರ ರೋಹಿತದಲ್ಲಿ ಪತ್ತೆ ಹಚ್ಚಿದ ರೇಖೆಗಳನ್ನು ಹೋಲುತ್ತಿದ್ದುವು. ಆದ್ದರಿಂದ ಆ ಧಾತುವನ್ನು ಹೀಲಿಯಮ್ (ಗ್ರೀಕ್: ಹೀಲಿಯಾಸ್=ಸೂರ್ಯ) ಎಂದು ಹೆಸರಿಸಿ ಭೂಮಿಯ ಮೇಲೂ ಅದರ ಅಸ್ತಿತ್ವ ಉಂಟೆಂದು ಸಾಧಿಸಿದ. 1898ರಲ್ಲಿ ಗಾಳಿಯಿಂದ ಪಡೆದ ಅನಿಲವನ್ನು ನಿಯಾನ್ (ಗ್ರೀಕ್: ನಿಯೊ=ಹೊಸ) ಎಂದೂ ಅಂತಿಮವಾಗಿ ದೊರೆತ ಎರಡು ಅನಿಲಗಳನ್ನು ಕ್ರಿಪ್ಟಾನ್ (ಗ್ರೀಕ್: ಕ್ರಿಪ್ಟಾಸ್=ಅಡಗಿದ) ಮತ್ತು ಕ್ಸೇನಾನ್ (ಗ್ರೀಕ್: ಕ್ಸೆನಾಸ್=ಅಪರಿಚಿತ) ಎಂದೂ ಕರೆದ. ಈ ಮೂರೂ ಜಡಾನಿಲಗ ಳಾಗಿದ್ದುವು. ಅಲ್ಲಿಗೆ ಶೂನ್ಯ ಗುಂಪಿನ ಜಡಾನಿಲಗಳ ಕುಟುಂಬ  ಪತ್ತೆಯಾ ದಂತಾಯಿತು. ತರುವಾಯ ಈ ಗುಂಪಿನ ಅತ್ಯಂತ ಭಾರ ಸದಸ್ಯ ಎನಿಸಿದ ರೇಡಾಸ್‍ನ ಆವಿಷ್ಕಾರವಾಯಿತು. ಈಗ ಈ ಆರೂ ಅನಿಲಗಳನ್ನು ವಿರಳಾನಿಲಗಳು ಅಥವಾ ಘನಾನಿಲಗಳು ಎಂದು ಕರೆಯುವುದು ವಾಡಿಕೆ. ರೇಡಾನ್‍ನ ಪರಮಾಣು ತೂಕವನ್ನು ನಿರ್ಣಯಿಸಿದಾತ ರ್ಯಾಮ್ಸೆಯೇ. ಜಡಾನಿಲಗಳ ಆವಿಷ್ಕಾರಕ್ಕಾಗಿ 1902ರಲ್ಲಿ ನೈಟ್‍ಹುಡ್ ಗೌರವವೂ 1904ರಲ್ಲಿ ನೊಬೆಲ್ ಪ್ರಶಸ್ತಿಯೂ ಈತನಿಗೆ ಸಂದುವು.   
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ